ಹೋಮ್ ಪೇಜ್
  ವೀಸಾಕ್ಕಾಗಿ ಅರ್ಜಿ
  ಅಪಾಂಯಿಂಟ್ ಮೆಂಟಿಗೆ ಶೆಡ್ಯೂಲ್
  ನಿಮ್ಮ ಅರ್ಜಿ ಟ್ರ್ಯಾಕ್ ಮಾಡಿ
  ವೀಸಾ ಶುಲ್ಕಗಳು
  ಹೆಚ್ಚುವರಿ ಸೇವೆಗಳು
  ಎಫ್ಎಕ್ಯುಗಳು
  ಗ್ರಾಹಕ ಸೇವೆಗಳು ಮತ್ತು ಫೀಡ್ ಬ್ಯಾಕ್
  ಮನವಿಗಳು
  ಕಾಂಟ್ಯಾಕ್ಟ್ ಅಸ್
  ವೀಸಾ ಅಪ್ಲಿಕೇಷನ್ ಕೇಂದ್ರಗಳಲ್ಲಿ ಸೇವಾ ನಿಯಮಗಳು
   
   
 
 

  • ಗ್ರಾಹಕ ಸೇವೆಗಳು ಮತ್ತು ಫೀಡ್ ಬ್ಯಾಕ್

    ಯುಕೆ ವೀಸಾಸ್ ಎಲ್ಲ ಗ್ರಾಹಕರಿಗೂ ನ್ಯಾಯಯುತ ಮತ್ತು ವೃತ್ತಿಪರ ಸೇವೆಯನ್ನು ನೀಡುವ ಗುರಿ ಹೊಂದಿದೆ. ನಾವು ಎಲ್ಲಿ ಸೇವೆಯನ್ನು ಉತ್ತಮಪಡಿಸಬೇಕೆನ್ನುವುದರ ಬಗ್ಗೆ ಗಮನಹರಿಸಲು ಸಹಾಯ ಮಾಡುವ ನಿಮ್ಮ ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತೇವೆ.

    ಲೋಕಲ್ ಪ್ರೊಸೆಸಿಂಗ್ ಅವಧಿ

    ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ನವದೆಹಲಿ ಮತ್ತು ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಮುಂಬೈ, ಚೆನ್ನೈ ಮತ್ತು ಕೋಲ್ಕಾತಾ ಇವು ಸದ್ಯಕ್ಕೆ ಹೆಚ್ಚಿನ ಅರ್ಜಿಗಳನ್ನು 4 ಕೆಲಸದ ದಿನಗಳ ಒಳಗಡೆ ಪ್ರೊಸೆಸ್ ಮಾಡಿ ಮುಗಿಸುತ್ತವೆ. ಆದರೆ ಒಂದು ವೇಳೆ ಎರಡನೇ ಪರೀಶೀಲನೆ ಅಗತ್ಯವಾದಲ್ಲಿ ಈ ಅವಧಿಯು 15 ದಿನಗಳವರೆಗೆ ತಲುಪಬಹುದು.

    ಒಂದು ವೇಳೆ ಹೆಚ್ಚುವರಿ ತನಿಖೆಯು ಅವಶ್ಯಕವಿದ್ದಲ್ಲಿ ಉದಾಹರಣೆಗೆ ಯುಕೆಯ ಗೃಹ ಸಚಿವಾಲಯದ ಶಿಫಾರಸನ್ನು ಪಡೆಯಬೇಕಿದ್ದಲ್ಲಿ ಕೆಲವು ಅರ್ಜಿಗಳಿಗೆ ಇನ್ನೂ ಹೆಚ್ಚು ಪ್ರಕ್ರಿಯೆ ಅವಧಿಯು ಅಗತ್ಯವಾಗಿರುತ್ತದೆ. ಇಂತಹ ಎಲ್ಲ ಸಂದರ್ಭಗಳಲ್ಲಿ ಅರ್ಜಿದಾರರನ್ನು ನೀವು ಈ ವರ್ಗದಲ್ಲಿರುವಿರೆಂಬ ಸಲಹೆಯನ್ನು ತಿಳಿಸಲಾಗುತ್ತದೆ.

    ಹಾಗಾಗಿ ಅರ್ಜಿದಾರರು ತಮ್ಮ ವೀಸಾ ಅರ್ಜಿಯನ್ನು ಹೆಚ್ಚಿನ ಸಮಯಾವಕಾಶವನ್ನು ಇಟ್ಟುಕೊಂಡು ನೀಡಲು ಸಲಹೆ ಮಾಡಲಾಗಿದೆ. ಆದರೆ ಅವರು ಪ್ರವಾಸ ಮಾಡಬಯಸುವ ದಿನಕ್ಕಿಂತ 3 ತಿಂಗಳಿಗೂ ಮೊದಲೇ ಅರ್ಜಿಯನ್ನು ಸಲ್ಲಿಸುವಂತಿಲ್ಲ.

    ಒಂದು ವೇಳೆ ನೀವು ಕೆಲಸದ ಅನುಮತಿ ಮತ್ತು ಎಚ್ ಎಸ್ಎಂಪಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಲ್ಲಿ:

    29 ಮಾರ್ಚ್,2007, uರಿಂದ ಮುಂದಿನ ಸೂಚನಾ ಪತ್ರ ಬರುವವರೆಗೂ ವರ್ಕ್ ಪರ್ಮಿಟ್ ಮತ್ತು ಎಚ್ ಎಸ್ಎಂಪಿ ಅರ್ಜಿಗಳ ಪ್ರಕ್ರಿಯಾ ಅವಧಿಯು 15 ದಿನಗಳದ್ದಾಗಿರುತ್ತದೆ. ನಾವು ಒಂದು ವಾಣಿಜ್ಯಿಕ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಕಾರ್ಯರೂಪಕ್ಕಿಳಿಸುತ್ತಿದ್ದೇವೆ. ಅದು ಇಂಟೆಗ್ರಾಸ್ಕ್ರೀನ್ (www.integrascreen.com) ವೀಸಾ ಅರ್ಜಿಗಳ ಜೊತೆಗೆ ಪೂರಕವಾಗಿ ನೀಡಲಾದ ಈ ಕಾಟೆಗರಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪರಿಶೀಲಿಸಲಿದೆ. ಒಂದು ಬಾರಿ ಅರ್ಜಿಯನ್ನು ವಿಎಫ್ಎಸ್ ಅಪ್ಲಿಕೇಶನ್ ಸೆಂಟರಿಗೆ ನೀಡಿದ ಮೇಲೆ, ನಾವು ವೀಸಾ ಅರ್ಜಿಯನ್ನು ನಿರ್ಧರಿಸುವ ಮುನ್ನ ಕಾಗದ ಪತ್ರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗುವುದು. ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.

    ಸದ್ಯಕ್ಕೆ ವರ್ಕ್ ಪರ್ಮಿಟ್ ಯುಕೆಯು ವರ್ಕ್ ಪರ್ಮಿಟ್ ಅಥವಾ ಲೆಟರ್ ಆಫ್ ಅಪ್ರೂವಲ್ ಅನ್ನು ನೀಡುವ ಮೊದಲು ಹೆಚ್ಚಿನ ಸಂಖ್ಯೆಯ ಕಾಗದ ಪತ್ರ ಪರಿಶೀಲನಾ ಪರೀಕ್ಷೆಗಳನ್ನು ನಡೆಸುತ್ತದೆ. ಅವರು ಹೆಚ್ಚಿನ ಸಮಯ ಅರ್ಜಿದಾರ ನೆಲೆಸಿರುವ ದೇಶದಲ್ಲಿಯೇ ಪರೀಕ್ಷಿಸಲು ಕೇಳಿಕೊಳ್ಳುತ್ತಾರೆ.

    ವಾಸ್ತವದಲ್ಲಿ ಹಾಗೆಂದರೆ ವೀಸಾ ಅರ್ಜಿ ಮಾಡುವದಕ್ಕಿಂತ ಮೊದಲೇ ಕಾಗದ ಪತ್ರಗಳನ್ನು ಪರೀಕ್ಷಿಸಲು ವಿನಂತಿಗಳನ್ನು ಸ್ವೀಕರಿಸುತ್ತಿದ್ದೇವೆ. ಹೆಚ್ಚುವರಿಯಾಗಿ ಒಂದು ಬಾರಿ ವರ್ಕ್ ಪರ್ಮಿಟ್ ಅಥವಾ ಎಚ್ಎಸ್ಎಂಪಿ ಪತ್ರವನ್ನು ನೀಡಿದರೆ ಮತ್ತು ನಾವು ವೀಸಾ ಅರ್ಜಿಯನ್ನು ಸ್ವೀಕರಿಸಿದ್ದಾದಲ್ಲಿ ಪೂರಕ ಕಾಗದ ಪತ್ರಗಳು ನೈಜವಾಗಿವೆಯೋ ಎನ್ನುವುದನ್ನು ಪತ್ತೆಹಚ್ಚಲು ನಾವು ನಮಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸುತ್ತೆವೆ ಮತ್ತು ಇದು ವೀಸಾ ನೀಡುವಿಕೆಯನ್ನು ವಿಳಂಬ ಮಾಡಬಹುದು. ಹಾಗಾಗಿ ಎರಡೆರಡು ಬಾರಿ ಕಾಗದ ಪತ್ರಗಳನ್ನು ಪರಿಶೀಲಿಸುವ ಬದಲು, ನಾವು ಪ್ರಕ್ರಿಯೆಯ ವೇಳೆ ಒಂದೇ ಬಾರಿ ಪರಿಕ್ಷಿಸುತ್ತೇವೆ ಎನ್ನುವುದು ಹೆಚ್ಚು ವಿವೇಕಯುತವಾದದ್ದು ಕೂಡಾ ಆಗಿದೆ.

    ಈ ಪರಿಶೀಲನೆಗಳನ್ನು ನಡೆಸಲು ಸಾಕಾಗುವಷ್ಟು ಸಮಯವನ್ನು ನೀವು ನೀಡುವುದು ಸಹಾ ಮಹತ್ವದ್ದಾಗಿರುತ್ತದೆ. ನಾವು ಯುಕೆಯ ಗಡಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅರ್ಜಿದಾರರಿಗೂ ಮತ್ತು ಸಿಬ್ಬಂದಿಗಳಿಗೂ ಅರ್ಜಿ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮತ್ತು ಸಾಧ್ಯವಿದ್ದಷ್ಟು ತೊಡಕಿಲ್ಲದಂತೆ ಮಾಡಲು ನಾವು ಬಯಸುತ್ತೇವೆ. ಇದನ್ನು ಸಾಧಿಸುವುದಕ್ಕಾಗಿ ನಾವು ನಿಮ್ಮ ಪಾಲುಗಾರಿಕೆಯಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ ಮತ್ತು ನಿಮ್ಮ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.

  • ದೂರುಗಳು

    ಯುಕೆ ವೀಸಾಸ್ ಎಲ್ಲ ಗ್ರಾಹಕರಿಗೂ ನ್ಯಾಯಯುತ ಮತ್ತು ವೃತ್ತಿಪರ ಸೇವೆಯನ್ನು ನೀಡುವ ಗುರಿ ಹೊಂದಿದೆ. ನಾವು ಎಲ್ಲಿ ಸೇವೆಯನ್ನು ಉತ್ತಮಪಡಿಸಬೇಕೆನ್ನುವುದರ ಬಗ್ಗೆ ಗಮನಹರಿಸಲು ಸಹಾಯ ಮಾಡುವ ನಿಮ್ಮ ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತೇವೆ.

    ಒಂದು ವೇಳೆ ನೀವು ನೀವು ಪಡೆದ ಸೇವೆಯ ಗುಣಮಟ್ಟದ ಬಗೆಗೆ ನಿಮಗೆ ಯಾವುದೇ ಆತಂಕವಿದ್ದಲ್ಲಿ ಅಥವಾ ಯಾವುದೇ ಅಭಿಪ್ರಾಯ ಹೊಂದಿದ್ದಲ್ಲಿ, ದಯವಿಟ್ಟು ಅದನ್ನು ನಮಗೆ ತಿಳಿಸಿ. ನಾವು ಎಲ್ಲ ದೂರುಗಳನ್ನೂ ಸಹಾ ಪೂರ್ತಿಯಾಗಿ ಪರೀಕ್ಷಿಸುತ್ತೇವೆ ಮತ್ತು 20 ಕೆಲಸದ ದಿನಗಳ ಒಳಗಾಗಿ ನಿಮಗೆ ಉತ್ತರವನ್ನು ನೀಡುತ್ತೇವೆ.

• ಒಂದು ವೇಳೆ ಭಾರತದಲ್ಲಿರುವ ಈ ಹೈ ಕಮೀಶನ್ ಅಥವಾ ಯಾವುದೇ ಡೆಪ್ಯುಟಿ ಹೈ ಕಮೀಶನ್ ಯುಕೆ ವೀಸಾಸ್ ನಿಂದ ನೀವು ಪಡೆದ ಸೇವೆಯ ಬಗೆಗೆ ಯಾವುದೇ ದೂರು ಸಲ್ಲಿಸಲು ನೀವು ಬಯಸುವುದಾದಲ್ಲಿ, ದಯವಿಟ್ಟು ನಿಮ್ಮ ದೂರನ್ನು ಲಿಖಿತವಾಗಿ ಡೈರೆಕ್ಟರ್ ವೀಸಾ ಸರ್ವೀಸಸ್ ವೀಸಾ ಡಿಪಾರ್ಟಮೆಂಟ್, ಬ್ರಿಟೀಶ್ ಹೈ ಕಮೀಶನ್, ಶಾಂತಿಪಥ್, ಚಾಣಾಕ್ಯಪುರಿ ನವದೆಹಲಿ 110021 ಈ ವಿಳಾಸಕ್ಕೆ ಕಳುಹಿಸಿ ಅಥವಾ ಈ ಮೇಲ್ ಮೂಲಕ visqry.newdelhi@fco.gov.uk ಗೆ ಕಳುಹಿಸಿ.
   
• ಒಂದು ವೇಳೆ ನೀವು ವಿಎಫ್ ಎಸ್ ನಿಂದ ಪಡೆದ ಸೇವೆಯ ಬಗ್ಗೆ ದೂರು ನೀಡಲು ಬಯಸುವಿರಾದಲ್ಲಿ, ನೀವು ನೇರವಾಗಿ ಈ ವೆಬ್ ಸೈಟ್ ಮೂಲಕ ದೂರನ್ನು ಸಲ್ಲಿಸಬಹುದು. ಇಲ್ಲವೇ ಸ್ವತಃ ಹೋಗಿ ವೀಸಾ ಅಪ್ಲಿಕೇಶನ್ ಸೆಂಟರಿನಲ್ಲಿ ಅಥವಾ ಡೈರೆಕ್ಟರ್ ವೀಸಾ ಸರ್ವೀಸಸ್ ನವದೆಹಲಿ ಇಲ್ಲಿಗೆ ಸಲ್ಲಿಸಬಹುದು.
© Copyright 2008. All rights reserved.  Disclaimer