ಹೋಮ್ ಪೇಜ್
  ವೀಸಾಕ್ಕಾಗಿ ಅರ್ಜಿ
  ಅಪಾಂಯಿಂಟ್ ಮೆಂಟಿಗೆ ಶೆಡ್ಯೂಲ್
  ನಿಮ್ಮ ಅರ್ಜಿ ಟ್ರ್ಯಾಕ್ ಮಾಡಿ
  ವೀಸಾ ಶುಲ್ಕಗಳು
  ಹೆಚ್ಚುವರಿ ಸೇವೆಗಳು
  ಎಫ್ಎಕ್ಯುಗಳು
  ಗ್ರಾಹಕ ಸೇವೆಗಳು ಮತ್ತು ಫೀಡ್ ಬ್ಯಾಕ್
  ಮನವಿಗಳು
  ಕಾಂಟ್ಯಾಕ್ಟ್ ಅಸ್
  ವೀಸಾ ಅಪ್ಲಿಕೇಷನ್ ಕೇಂದ್ರಗಳಲ್ಲಿ ಸೇವಾ ನಿಯಮಗಳು
   
   
 
 
  • ಡಿಸ್ ಕ್ಲೇಮರ್

    • ವಿಎಫ್ಎಸ್ ಗ್ಲೋಬಲ್ ಸರ್ವೀಸಸ್ ಪ್ರೈ. ಲಿ. ಇಂಡಿಯಾ( ಇಲ್ಲಿಂದ ಮುಂದೆ ವಿಎಫ್ಎಸ್ ಎಂದು ಹೇಳಲಾಗುತ್ತದೆ)ವು ಮುಂಬೈ, ಪುಣೆ, ಅಹಮ್ಮದಾಬಾದ್,ಚೆನ್ನೈ, ಬೆಂಗಳೂರು, ಹೈದ್ರಾಬಾದ್, ಕೊಚಿನ್, ದೆಹಲಿ, ಜಲಂಧರ್, ಚಂಡೀಘರ್ ಮತ್ತು ಕೋಲ್ಕಾತಾಗಳಲ್ಲಿ ಯುಕೆಗೆ ಪ್ರಯಾಣಿಸುವ ಬಗೆಗಿನ ವೀಸಾ ಅರ್ಜಿಗಳನ್ನು ಸ್ವೀಕರಿಸಲು ಅಧಿಕಾರ ಪಡೆದಿದೆ. ಯುಕೆ ವೀಸಾಕ್ಕಾಗಿನ ಅರ್ಜಿದಾರರಿಂದ ವಿಎಫ್ಎಸ್ ಅಗತ್ಯ ಕಾಗದ ಪತ್ರಗಳನ್ನು ಮತ್ತು ಹೆಚ್ಚಿನ ಪ್ರಕ್ರಿಯೆಗಳನ್ನು ನಡೆಸುವುದಕ್ಕಾಗಿ ಅನ್ವಯಿಸುವ ಶುಲ್ಕಗಳನ್ನು ಸ್ವೀಕರಿಸುತ್ತದೆ. ಬ್ರಿಟೀಶ್ ಹೈ ಕಮೀಶನ್ ಮತ್ತು ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಗಳು ವೀಸಾ ಅರ್ಜಿಗಳನ್ನು ಪರಿಶೀಲನೆ ಮಾಡಿದ ನಂತರ, ವಿಎಫ್ಎಸ್ ಅರ್ಜಿದಾರರಿಗೆ ಹಿಂದಿರುಗಿ ನೀಡಬೇಕಾದ ಕಾಗದ ಪತ್ರಗಳನ್ನು, ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಸ್ವಯಂ ನೇರವಾಗಿ ಹಿಂದಿರುಗಿ ನೀಡಲು ಆಯ್ಕೆ ಮಾಡಿದ ಕಾಗದ ಪತ್ರಗಳನ್ನು ಹೊರತುಪಡಿಸಿ ಉಳಿದವುಗಳನ್ನು ನೋಡಿಕೊಳ್ಳುತ್ತದೆ.
    • ವಿಎಫ್ಎಸ್ ಈ ಮೂಲಕ ಘೋಷಿಸುವುದೇನೆಂದರೆ ವೀಸಾ ಅರ್ಜಿಯ ಪರೀಶೀಲನೆಯಲ್ಲಿ ವಿಎಫ್ಎಸ್ ಗೆ ಯಾವ ಪಾತ್ರವೂ ಇರುವುದಿಲ್ಲ. ಅದು ಬ್ರಿಟೀಶ್ ಹೈ ಕಮೀಶನ್ ದೆಹಲಿ ಮತ್ತು ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಮುಂಬೈ, ಚೆನ್ನೈ, ಮತ್ತು ಕೋಲ್ಕತಾದ ವೀಸಾ ವಿಭಾಗದ ವಿಶೇಷಾಧಿಕಾರವಾಗಿದೆ. ಒಂದು ಬಾರಿ ಬ್ರೀಟಿಶ್ ಹೈ ಕಮೀಶನ್, ದೆಹಲಿ ಮತ್ತು ಮುಂಬೈ, ಚೆನ್ನೈ, ಮತ್ತು ಕೋಲ್ಕತಾ ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಗೆ ಕಳುಹಿಸಿದ ಮೇಲೆ ವಿಎಫ್ಎಸ್ ಯಾವುದೇ ರೀತಿಯಲ್ಲಿಯೂ ಪ್ರಕ್ರಿಯೆಯ ವೇಳೆ ವಿಳಂಬ ಅಥವಾ ವೀಸಾ ಅರ್ಜಿಯನ್ನು ತಿರಸ್ಕರಿಸುವುದಕ್ಕೆ ಸಹಾ ಹೊಣೆಗಾರನಾಗಿರುವುದಿಲ್ಲ ಅಥವಾ ಜವಾಬ್ದಾರನಾಗಿರುವುದಿಲ್ಲ.
    • ವಿಎಫ್ಎಸ್ ಅರ್ಜಿದಾರರ ಕಾಗದ ಪತ್ರಗಳನ್ನು ನಿರ್ವಹಿಸುವಾಗ ತರ್ಕಬದ್ಧವಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಯಾವುದೇ ಅರ್ಜಿದಾರನ ಯಾವುದೇ ಕಾಗದ ಪತ್ರಗಳು ಮಾರ್ಗಮಧ್ಯದಲ್ಲಿ ಅಪಘಾತ, ಕಳುವು, ನೈಸರ್ಗಿಕ ದುರಂತ ಅಥವಾ ನಮ್ಮ ನಿಯಂತ್ರಣದಲ್ಲಿರದ, ಅಥವಾ ವಿಎಫ್ಎಸ್ನ ಉದ್ದೇಶ ಪೂರಿತ ತಪ್ಪಿಲ್ಲದ ವಿಧಾನಗಳಿಂದ ನಾಶವಾದಲ್ಲಿ ಅದಕ್ಕೆ ವಿಎಫ್ಎಸ್ ಜವಾಬ್ದಾರನಾಗುವುದಿಲ್ಲ.
    • ಅರ್ಜಿದಾರರು ಕೋರಿಯರ್ ಸೇವೆ ಮತ್ತು ಡೆಲಿವರೀ ಸೇವೆಯನ್ನು ಥರ್ಡ್ ಪಾರ್ಟಿಯಿಂದ ನಡೆಸಲು ಒಪ್ಪಿಕೊಂಡಲ್ಲಿ ಮತ್ತು ಕೋರಿಯರ್ ಕಂಪನಿಯಿಂದಾದ ಯಾವುದೇ ತಪ್ಪಿಗೆ ವಿಎಫ್ಎಸ್ ಯಾವುದೇ ರೀತಿಯಿಂದಲೂ ಹೊಣೆಗಾರನಾಗಿರುವುದಿಲ್ಲ ಮತ್ತು ಜವಾಬ್ದಾರನಾಗಿರುವುದಿಲ್ಲ. ಒಂದು ವೇಳೆ ಮಾರ್ಗಮಧ್ಯದಲ್ಲಿ ಪಾಸ್ ಪೋರ್ಟ್ ಹಾಳಾದಲ್ಲಿ ಅಥವಾ ನಷ್ಟವಾದಲ್ಲಿ ವಿಎಫ್ಎಸ್ ನ ಹೊಣೆಗಾರಿಕೆಯು ಹಾಳಾದ ಅಥವಾ ನಾಶವಾದ ಪಾಸ್ ಪೋರ್ಟ್ ಗಳನ್ನು ಸಾಮಾನ್ಯ ಅರ್ಜಿ ಪ್ರಕ್ರಿಯೆಯ ಮೂಲಕ ರಿಪ್ಲೇಸ್ ಮಾಡುವ ಸಲುವಾಗಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರ ಸಚೀವಾಲಯಗಳಿಗೆ ನೀಡಿದ ಶುಲ್ಕಗಳ ಮರುಪಾವತಿಗೆ ಸೀಮಿತವಾಗಿರುತ್ತದೆ.
    • ಅರ್ಜಿದಾರನಿಗೆ ಆತನ / ಆಕೆಯ ಪೂರಕ ಕಾಗದ ಪತ್ರ ಮತ್ತು ಪಾಸ್ ಪೋರ್ಟ್ ಸಂದರ್ಭೋಚಿತವಾಗಿ ಹಾಳಾಗುವಿಕೆ ಅಥವಾ ಕಳೆದುಹೋದ ಕಾರಣ ಪರೋಕ್ಷವಾಗಿ ನಷ್ಟ ಸಂಭವಿಸಿದಲ್ಲಿ ವಿಎಫ್ಎಸ್ ಅದಕ್ಕೆ ಹೊಣೆಗಾರನಾಗಿರುವುದಿಲ್ಲ ಮತ್ತು ಜವಾಬ್ದಾರನಾಗಿರುವುದಿಲ್ಲ. ಅರ್ಜಿದಾರನಿಗೆ ಆತನ / ಆಕೆಯ ಪೂರಕ ಕಾಗದ ಪತ್ರ ಮತ್ತು ಪಾಸ್ ಪೋರ್ಟ್ ಸಂದರ್ಭೋಚಿತವಾಗಿ ಹಾಳಾಗುವಿಕೆ ಅಥವಾ ಕಳೆದುಹೋದ ಕಾರಣ ಪರೋಕ್ಷವಾಗಿ ನಷ್ಟ ಸಂಭವಿಸಿದಲ್ಲಿ ವಿಎಫ್ಎಸ್ ಅದಕ್ಕೆ ಹೊಣೆಗಾರನಾಗಿರುವುದಿಲ್ಲ ಮತ್ತು ಜವಾಬ್ದಾರನಾಗಿರುವುದಿಲ್ಲ.
    • ಯಾವಾಗ ಅರ್ಜಿದಾರ ಅಥವಾ ಅರ್ಜಿದಾರ ಪ್ರತಿನಿಧಿ ಪಾಸ್ ಪೋರ್ಟ್ ಮತ್ತು ಸಂಬಂಧಿತ ಕಾಗದ ಪತ್ರಗಳನ್ನು ಅನ್ವಯಿಸುವ ವೀಸಾ ಶುಲ್ಕಗಳ ಜೊತೆಯಲ್ಲಿ ಸಲ್ಲಿಸುತ್ತಾರೋ, ಆಗಲೇ ಅರ್ಜಿದಾರರು ಇದರಲ್ಲಿರುವ ನಿಯಮ ಮತ್ತು ಷರತ್ತು ಹಾಗೂ ವಿವರಗಳನ್ನು ತಿಳಿದಿದ್ದಾರೆ ಎಂಬುದು ಸ್ಪಷ್ಟ. ಯಾವುದೇ ಪರಿಸ್ಥಿತಿಯಲ್ಲಿಯೂ ಸಹಾ ಅರ್ಜಿದಾರರು ಪಾವತಿಸಿದ ಶುಲ್ಕಗಳನ್ನು ಹಿಂದಿರುಗಿ ನೀಡಲಾಗುವುದಿಲ್ಲ.
    • ಡಿಮಾಂಡ್ ಡ್ರಾಫ್ಟ್ ಅವುಗಳನ್ನು ನಗದೀಕರಿಸುವದಕ್ಕೆ ಸಂಬಂಧಪಟ್ಟಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಸಹಾ ಪಾವತಿಸಿದ ಶುಲ್ಕಗಳನ್ನು ಹಿಂದಿರುಗಿ ನೀಡಲಾಗುವುದಿಲ್ಲ .
    • ಜಾಹಿರಾತು ಮಾಹಿತಿಯು ಹಿಂದಿರುಗಿಸುವಂತಹ ಕಾಗದ ಪತ್ರಗಳನ್ನು ಜೊತೆಗೆ ಹೊಂದಿರಬಹುದು. ಒಂದು ವೇಳೆ ಅರ್ಜಿದಾರರು ಜಾಹಿರಾತು ಮಾಹಿತಿಯನ್ನು ಪಾಸ್ ಪೋರ್ಟ್ ಮತ್ತಿತರ ಸಂಬಂಧಿಸಿದ ಕಾಗದ ಪತ್ರಗಳೊಂದಿಗೆ ಸ್ವೀಕರಿಸಲು ಇಷ್ಟ ಪಡದಿದ್ದಲ್ಲಿ, ಈ ವಿಷಯವನ್ನು ವಿಎಫ್ಎಸ್ ಗೆ ಮುಂಚಿತವಾಗಿಯೇ ತಿಳಿಸಿರಬೇಕು. ದಯವಿಟ್ಟು ನೆನಪಿಡಿ ಪಾಸ್ ಪೋರ್ಟ್ ಮತ್ತಿತರ ಸಂಬಂಧಿಸಿದ ಕಾಗದ ಪತ್ರಗಳೊಂದಿಗೆ ಹಿಂದೆ ಕಳುಹಿಸಿರುವ ಜಾಹಿರಾತು ಮಾಹಿತಿಯು ಬ್ರಿಟೀಶ್ ಸರ್ಕಾರದ ಅನುಮೋದನೆಯನ್ನು ಹೊಂದಿರುತ್ತದೆ.
    • ವಿಎಫ್ಎಸ್ಸಿನ ಯಾವುದೇ ಸಿಬ್ಬಂದಿ ಸಹಾ ಇಲ್ಲಿ ನೀಡಿರುವ ವಿಷಯಗಳನ್ನು ಬದಲಿಸಲು, ತಿದ್ದುಪಡಿ ಮಾಡಲು, ಉತ್ಪ್ರೇಕ್ಷಿಸಲು ಯಾವುದೇ ಅಧಿಕಾರ ಅಥವಾ ಹಕ್ಕನ್ನು ಹೊಂದಿರುವುದಿಲ್ಲ.
    • ಎಲ್ಲ ಪ್ರತಿಪಾದನೆಗಳು, ಭಿನ್ನಾಭಿಪ್ರಾಯಗಳು ಅವು ಯಾವುದೇ ರೀತಿಯವಾಗಿದ್ದರೂ ಸಹಾ, ಅವೆಲ್ಲ ಮುಂಬೈನ ನ್ಯಾಯಾಲಯಗಳ ವ್ಯಾಪ್ತಿಗೆ ಮಾತ್ರವಷ್ಟೇ ಬರುತ್ತವೆ.
© Copyright 2008. All rights reserved.  Disclaimer