- ಅಪ್ಲಿಕೇಶನ್ ಬಗ್ಗೆ ನಿರ್ಧಾರಕ್ಕೆ ಎಷ್ಟು ಕಾಲ ತೆಗೆದುಕೊಳ್ಳುತ್ತದೆ?
ಪ್ರೊಸೆಸಿಂಗ್ ಅವಧಿಯು ನೀವು ಯಾವ ಬಗೆಯ ವೀಸಾಕ್ಕೆ ಅಪ್ಲೈ ಮಾಡಿದ್ದೀರೆನ್ನುವುದನ್ನು ಅವಲಂಬಿಸಿರುತ್ತದೆ. ನಮ್ಮ ಸದ್ಯದ ಪ್ರೊಸೆಸಿಂಗ್ ಅವಧಿಯನ್ನು ಕಸ್ಟಮರ್ ಸರ್ವೀಸ್ ಮತ್ತು ಫೀಡ್ ಬ್ಯಾಕ್ ಪೇಜಿನಲ್ಲಿ ನೋಡಬಹುದಾಗಿದೆ..
- ಯಾರನ್ನು ನೀವು ಸಂದರ್ಶಿಸುತ್ತೀರಿ?
ನಾವು ಯಾರ ವೀಸಾ ಅರ್ಜಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಾಗಿ ನಿಜಕ್ಕೂ ಯಾರನ್ನು ನೋಡಲು ಬಯಸುತ್ತೇವೆಯೋ ಕೇವಲ ಅಂಥ ಜನರನ್ನು ಮಾತ್ರ ಸಂದರ್ಶಿಸುವುದು ನಮ್ಮ ಉದ್ದೇಶ. ನೀವು ನಿಮ್ಮ ಅರ್ಜಿಯನ್ನು ಪೂರ್ತಿಯಾಗಿ ತಯಾರು ಮಾಡಿದ್ದಲ್ಲಿ ಮತ್ತು ನಮಗೆ ಅಗತ್ಯವಿರುವ ಎಲ್ಲ ಕಾಗದ ಪತ್ರಗಳನ್ನು ನೀಡಿದ್ದಲ್ಲಿ, ವೀಸಾ ಆಫೀಸರ್ ಯಾವುದೇ ಸಂದರ್ಶನವಿಲ್ಲದೇ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿರುತ್ತದೆ. ಇತರೆ ಭಾಷೆಗಳಲ್ಲಿರುವ ಯಾವುದೇ ಕಾಗದ ಪತ್ರಗಳ ಇಂಗ್ಲಿಷ್ ಅನುವಾದವನ್ನು ನೀವು ನೀಡಬೇಕೆಂದು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ.
- ನೀವು ಒಂದು ವೇಳೆ ನನ್ನ ವೀಸಾ ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಮುಂದೇನು?
ವಿಶ್ವಾದ್ಯಂತ 93% ಅರ್ಜಿದಾರರು ಅವರು ಅರ್ಜಿ ಸಲ್ಲಿಸಿದ ವೀಸಾವನ್ನು ಪಡೆಯುತ್ತಿದ್ದಾರೆ. ಒಂದು ವೇಳೆ ನಾವು ನಿಮಗೆ ವೀಸಾವನ್ನು ನಿರಾಕರಿಸಿದಲ್ಲಿ, ನಿರಾಕರಿಸುವಲ್ಲಿನ ಕಾರಣಗಳನ್ನು ವಿವರಿಸಲು ನಾವು ನಿಮಗೆ ಒಂದು ಲಿಖಿತವಾದ ನೋಟೀಸ್ ಕಳುಹಿಸುತ್ತೇವೆ. ವಲಸೆ ನಿಯಮಗಳಿಗೆ ಸಂಬಂಧಿಸಿದಂತೆ, ನಾವು ನ್ಯಾಯಸಮ್ಮತವಾದ ನಿರ್ಧಾರ ಮಾಡಿದ್ದೇವೆನ್ನುವುದನ್ನು ಖಚಿತಪಡಿಸಿಕೊಳ್ಳಲು ಒಬ್ಬ ಎಂಟ್ರೀ ಕ್ಲಿಯರನ್ಸ್ ಮ್ಯಾನೇಜರ್ ಪುನರಾವಲೋಕ ಮಾಡುತ್ತಾರೆ.
ಕೆಲವು ಪ್ರಸಂಗಗಳಲ್ಲಿ, ನೀವು ನಿರ್ಧಾರದ ವಿರುದ್ಧ ಮನವಿ ಸಲ್ಲಿಸುವ ಹಕ್ಕು ಹೊಂದಿರುತ್ತೀರಿ. ಇದು ಉಚಿತವಾಗಿರುತ್ತದೆ. ನಿರ್ಧಾರದ ವಿರುದ್ಧ ನೀವು ಮನವಿ ಸಲ್ಲಿಸುವ ಹಕ್ಕು ಹೊಂದಿರುವ ಅರ್ಜಿಯ ವಿಧಗಳನ್ನು ಯುಕೆ ಕಾನೂನು ನಿರ್ದೇಶಿಸಿದೆ. ನಾವು ನಿಮ್ಮ ವೀಸಾವನ್ನು ನಿರಾಕರಿಸಿದಲ್ಲಿ ನಿಮಗೆ ಮನವಿ ಮಾಡಿಕೊಳ್ಳುವ ಹಕ್ಕು ಇದೆಯೇ ಎನ್ನುವುದನ್ನು ತಿಳಿಸುತ್ತೇವೆ ಮತ್ತು ಒಂದು ವೇಳೆ ಹಾಗಿದ್ದಲ್ಲಿ, ನೀವು ಹೇಗೆ ಮನವಿ ಸಲ್ಲಿಸಬೇಕು ಎಂಬುದಕ್ಕೆ ನಾವು ಸಲಹೆಯನ್ನು ನೀಡುತ್ತೇವೆ. .
ಒಂದು ವೇಳೆ ನಿಮಗೆ ಮನವಿ ಸಲ್ಲಿಸುವ ಹಕ್ಕು ಇಲ್ಲದೇ ಇದ್ದಲ್ಲಿ, ನೀವು ಮತ್ತೆ ಸಹಾ ಬರೆಯಬಹುದು ಮತ್ತು ನಿಮ್ಮ ಅರ್ಜಿಯನ್ನು ಮತ್ತೊಮ್ಮೆ ಪುನರಾವಲೋಕನ ಮಾಡುವಂತೆ ನಮ್ಮನ್ನು ಕೇಳಿಕೊಳ್ಳಬಹುದು. ನೀವು ಯಾವುದೇ ಪ್ರಸ್ತುತವೆನ್ನಿಸುವ ಪೂರಕ ಕಾಗದ ಪತ್ರಗಳನ್ನು ನೀಡಬಹುದು ಮತ್ತು ನಿಮ್ಮ ಆಲೋಚನೆಯ ಪ್ರಕಾರ ಯಾಕಾಗಿ ನಿರ್ಧಾರವು ತಪ್ಪೆಂದುಕೊಳ್ಳುತ್ತೀರೋ ಅದನ್ನು ಮುಂದಿಡಬಹುದು. ಇದು ಎಂಟ್ರಿ ಕ್ಲಿಯರೆನ್ಸ್ ಮ್ಯಾನೇಜರ್ ಗೆ ನಿಮ್ಮ ಅರ್ಜಿಯನ್ನು ವಿಸ್ತೃತವಾಗಿ ಅವಲೋಕಿಸುವಲ್ಲಿ ಸಹಾಯ ಮಾಡುತ್ತದೆ.
ಒಂದು ವೇಳೆ ನಾವು ನಿಮಗೆ ಈ ಮೊದಲೇ ವೀಸಾವನ್ನು ನಿರಾಕರಿಸಿದ್ದಲ್ಲಿ, ನೀವು ಯಾವುದೇ ಸಮಯದಲ್ಲೂ ಮತ್ತೊಂದು ಅರ್ಜಿಯನ್ನು ಸಲ್ಲಿಸಬಹುದು. ಆದರೆ ಒಂದು ವೇಳೆ ನಾವು ನಿಮಗೆ ವೀಸಾ ನಿರಾಕರಿಸಲು ನೀಡಿರುವ ಕಾರಣವು ಇನ್ನೂ ಅನ್ವಯಿಸುತ್ತಿದ್ದಲ್ಲಿ ,ನಾವು ಇನ್ನೊಂದು ಸಲವೂ ಸಹಾ ವೀಸಾವನ್ನು ನಿರಾಕರಿಸಬಹುದು.
|