|
|
- ಅಪಾಂಯಿಂಟ್ ಮೆಂಟಿಗೆ ಶೆಡ್ಯೂಲ್
ಅನಗತ್ಯವಾಗಿ ಕಾಯುವುದನ್ನು ತಪ್ಪಿಸಿಕೊಳ್ಳಲು ನೀವು ಅಪ್ಲಿಕೇಷನ್ ಸೆಂಟರನ್ನು ಮೊದಲೇ ಅಪಾಂಯಿಂಟ್‌ಮೆಂಟ್ ಪಡೆದೇ ಭೇಟಿ ನೀಡುವುದನ್ನು ನಾವು ಶಿಫಾರಸು ಮಾಡುತ್ತೇವೆ.
ಅಪಾಂಯಿಂಟ್‌ಮೆಂಟ್ ಪಡೆಯಲು ನೀವು ನಮಗೆ ಬೆಳಿಗ್ಗೆ8.00ರಿಂದ ಅಪರಾಹ್ನ 3.00ರ ಅವಧಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಕೆಳಗಿನ ಮಾಹಿತಿಗಳೊಂದಿಗೆ ಕಾಲ್ ಮಾಡಬೇಕು.
ಅರ್ಜಿ ಸಲ್ಲಿಸುವವನ ಹೆಸರು ಮತ್ತು ಸರ್ನೇಮ್
ಪಾಸ್‌ಪೋರ್ಟ್ ನಂಬರ್
ವೀಸಾ ಕೆಟಗರಿ
ನೀವು ಭೇಟಿ ನೀಡುವ ವೀಸಾ ಅಪ್ಲಿಕೇಷನ್ ಕೇಂದ್ರ
ನೀವು ಬಯಸುವ ದಿನ ಮತ್ತು ಸಮಯ (3 ಆಯ್ಕೆಗಳನ್ನು ಕೊಟ್ಟಿರಿ)
ನಿಮ್ಮ ಅಪಾಂಯಿಂಟ್‌ಮೆಂಟ್ ಖಚಿತಪಡಿಸಲು ನಾವು ನಿಮಗೆ ಒಂದು ಇಮೇಲ್‌ನ್ನು ದಿನದ ಅಂತ್ಯದಲ್ಲಿ ಕಳಿಸುತ್ತೇವೆ. ಇದನ್ನು ಪ್ರಿಂಟ್ ಮಾಡಿ ನಿಮ್ಮೊಂದಿಗೆ ವೀಸಾ ಅಪ್ಲಿಕೇಷನ್ ಕೇಂದ್ರಕ್ಕೆ ಬರುವಾಗ ತನ್ನಿ. ನೀವು ಅಪಾಂಯಿಂಟ್‌ಮೆಂಟ್ ನೀಡಲಾದ ಸಮಯಕ್ಕಿಂತ 5 ನಿಮಿಷ ಮುನ್ನವೇ ವೀಸಾ ಅಪ್ಲಿಕೇಷನ್ ಕೇಂದ್ರದಲ್ಲಿ ಹಾಜರಿರಬೇಕು.
ನಿರೀಕ್ಷಾ ಅವಧಿ ಕಡಿಮೆ ಮಾಡಿಕೊಳ್ಳಲು ದಯವಿಟ್ಟು ಪೂರ್ಣ ಅಪ್ಲಿಕೇಷನ್ ಪ್ಯಾಕ್ (ಪೂರ್ಣ ತುಂಬಿದ ಅಪ್ಲಿಕೇಷನ್ ಫಾರ್ಮ್, ಪಾಸ್‌ಪೋರ್ಟ್, ನೀಡಬೇಕಾದ ವೀಸಾ ಶುಲ್ಕಕ್ಕೆ ಡಿಮಾಂಡ್ ಡ್ರಾಫ್ಟ್ ಮತ್ತು ಸಲಹೆ ನೀಡಲಾದ ದಾಖಲಾತಿಗಳು ). ನಿಮ್ಮೊಂದಿಗೆ ತನ್ನಿ.
ನವದೆಹಲಿ, ಜಲಂಧರ್ ಅಥವಾ ಚಂಡೀಗಢದಲ್ಲಿ ಅಪ್ಲೈ ಮಾಡಲು ಇಮೇಲ್ ಮಾಡಿ: appointmentnorth@vfs-uk-in.com
ಮುಂಬೈ, ಅಹ್ಮದಾಬಾದ್ ಅಥವಾ ಪುಣೆಗಳಲ್ಲಿ ಅಪ್ಲೈ ಮಾಡಲು ಇಮೇಲ್ ಮಾಡಿ:
appointmentwest@vfs-uk-in.com
ಚೆನ್ನೈ, ಬೆಂಗಳೂರು, ಹೈದರಾಬಾದ್ ಅಥವಾ ಕೊಚ್ಚಿನ್‌ಗಳಲ್ಲಿ ಅಪ್ಲೈ ಮಾಡಲು ಇಮೇಲ್ ಮಾಡಿ: appointmentsouth@vfs-uk-in.com
ಕೋಲ್ಕತ್ತಾದಲ್ಲಿ ಅಪ್ಲೈ ಮಾಡಲು ಇಮೇಲ್ ಮಾಡಿ: appointmenteast@vfs-uk-in.com
|
|